ಭಾರತ ಸರ್ಕಾರದ ಜವಳಿ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಸೆಂಟ್ರಲ್ ಸಿಲ್ಕ್ ಟೆಕ್ನಾಲಾಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ (CSTRI) ಸಂಸ್ಥೆಯು ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕಟಣೆ ಬಿಡುಗಡೆ ಮಾಡಿದೆ.
ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಒಟ್ಟು 60 ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕದಂದು ನೇರ ಸಂದರ್ಶನಕ್ಕೆ (Walk-in Interview) ಹಾಜರಾಗಬಹುದು.
ಹುದ್ದೆಗಳ ವಿವರ
-
ಮಾಸ್ಟರ್ ರೀಲರ್ಸ್
-
ತಂತ್ರಜ್ಞರು
-
ನೇಕಾರರು
-
ಡೈಯರ್ಸ್
ಒಟ್ಟು ಹುದ್ದೆಗಳು: 60
ಈ ನೇಮಕಾತಿ ಸಿಲ್ಕ್ ಸಮಗ್ರ-2 ಯೋಜನೆ ಅಡಿಯಲ್ಲಿ ಜೂನ್ 2025 ರಿಂದ ಮಾರ್ಚ್ 2026 ರವರೆಗೆ ಸುಮಾರು 10 ತಿಂಗಳ ಅವಧಿಗೆ ನಡೆಯಲಿದೆ.
ಸಂದರ್ಶನ ದಿನಾಂಕ
ದಿನಾಂಕ: 30-05-2025
ಸಮಯ: ಬೆಳಿಗ್ಗೆ 11:00 ಗಂಟೆ
ಹುದ್ದೆಗಳ ಸ್ಥಳ
ಕರ್ನಾಟಕದಲ್ಲಿ ಕೆಳಗಿನ ಜಿಲ್ಲೆಗಳಲ್ಲಿ ಹುದ್ದೆಗಳು ಲಭ್ಯವಿವೆ:
-
ಚಿಕ್ಕಬಳ್ಳಾಪುರ
-
ರಾಮನಗರ
-
ಧಾರವಾಡ
ಇದರ ಜೊತೆಗೆ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಬಿಹಾರ, ಛತ್ತೀಸಗಢ, ಒಡಿಶಾ ಮತ್ತು ನಾರ್ತ್ ಈಸ್ಟರ್ನ್ ರಾಜ್ಯಗಳಲ್ಲಿಯೂ ನೇಮಕಾತಿ ನಡೆಯಲಿದೆ.
ಸಂದರ್ಶನ ನಡೆಯುವ ಸ್ಥಳಗಳು
ಚಿಕ್ಕಬಳ್ಳಾಪುರ:
ಸಿಲ್ಕ್ ಟೆಕ್ನಿಕಲ್ ಸರ್ವೀಸ್ ಸೆಂಟರ್, ಸಿದ್ಲಗಟ್ಟ, ಚಿಕ್ಕಬಳ್ಳಾಪುರ – 562105
ರಾಮನಗರ:
ಸಿಲ್ಕ್ ಟೆಕ್ನಿಕಲ್ ಸರ್ವೀಸ್ ಸೆಂಟರ್, CSTRI, ಸೆಂಟ್ರಲ್ ಸಿಲ್ಕ್ ಬೋರ್ಡ್, ಕೊಕೂನ್ ಮಾರ್ಕೆಟ್, ರಾಮನಗರ – 571511
ಧಾರವಾಡ:
ಸಿಲ್ಕ್ ಟೆಕ್ನಿಕಲ್ ಸರ್ವೀಸ್ ಸೆಂಟರ್, ಸಿಲ್ಕ್ ಪಾರ್ಟ್, ಸೆರಿಕಲ್ಚರ್ ಕಾಂಪ್ಲೆಕ್ಸ್, ಪಿಜಿ ರಸ್ತೆ, ರಾಯಪುರ, ಧಾರವಾಡ – 580009
ಅರ್ಹತೆಗಳು
-
ಕನಿಷ್ಠ 8ನೇ ತರಗತಿ ಪಾಸ್
-
ಸಿಲ್ಕ್ ರೀಲಿಂಗ್, ನೇಯ್ಗೆ ಅಥವಾ ಸಂಸ್ಕರಣೆ ಕ್ಷೇತ್ರದಲ್ಲಿ 2-3 ವರ್ಷದ ಅನುಭವ
-
ತರಬೇತಿ ನೀಡುವ ಕೌಶಲ್ಯ ಇದ್ದರೆ ಆದ್ಯತೆ
-
ಕನಿಷ್ಠ 21 ವರ್ಷ ವಯಸ್ಸು
ಸಂದರ್ಶನಕ್ಕೆ ತರಬೇಕಾದ ದಾಖಲೆಗಳು
-
ಗುರುತಿನ ಚೀಟಿ ಮತ್ತು ವಿಳಾಸ ಪುರಾವೆ
-
ರೇಷನ್ ಕಾರ್ಡ್ / ಆಧಾರ್ ಕಾರ್ಡ್
-
ಶಾಲಾ ಮತ್ತು ಶೈಕ್ಷಣಿಕ ಪ್ರಮಾಣಪತ್ರಗಳು
-
ಪಾಸ್ಪೋರ್ಟ್ ಅಳತೆಯ 2 ಫೋಟೋಗಳು
-
ಕಾರ್ಯಾನುಭವದ ದಾಖಲೆಗಳು
ಪ್ರಮುಖ ಸೂಚನೆ
-
ಅಭ್ಯರ್ಥಿಗಳಿಗೆ ಪ್ರಯಾಣ ಭತ್ಯೆ ಅಥವಾ ಇತರ ಭತ್ಯೆಗಳು ನೀಡಲಾಗುವುದಿಲ್ಲ
-
ಹುದ್ದೆಗಳು ಗುತ್ತಿಗೆ ಆಧಾರಿತವಾಗಿವೆ
-
ಅಪೂರ್ಣ ದಾಖಲೆಗಳಿದ್ದರೆ ಅಭ್ಯರ್ಥಿಗಳನ್ನು ಸಂದರ್ಶನದಲ್ಲೇ ತಿರಸ್ಕರಿಸಲಾಗುತ್ತದೆ
ಹೆಚ್ಚಿನ ಮಾಹಿತಿಗಾಗಿ
ಅಧಿಕೃತ ವೆಬ್ಸೈಟ್:
-
cstri.res.in
-
csb.gov.in